ಬಡವರಾಗಿಯೇ ಉಳಿಯುವುದು ಯಾರಿಗೆ ಇಷ್ಟ?
ಶ್ರೀಮಂತರಾಗುವುದಕ್ಕೆ ಎಲ್ಲರಿಗೂ ಆಸೆ ಇದೆ. ಆದರೆ ಆಸೆಯೇನೋ ಶ್ರೀಮಂತರಾಗುವುದಕ್ಕೆ ಇದೆಯೋ ಹೊರತು ವರ್ತನೆ ಮಾತ್ರ ಬಡವರಾಗುವುದಕ್ಕೆ ಪೈಪೋಟಿ ನಡೆಸಿದ ಹಾಗೆ ಇದೆ. ಬಡವರಾಗಿಯೇ ಉಳಿಯುವ ಮಹಾನುಭಾವರ ವರ್ತನೆಗಳು ಹೇಗಿರುತ್ತವೆ ಎನ್ನುವುದನ್ನು ಉದಾಹರಣೆಗಳ ಮೂಲಕವೇ ಅರಿಯೋಣ. ಹಾಗೆ ಅರಿಯುತ್ತಲೇ ನಾವು ಎಲ್ಲಿದ್ದೇವೆ ಎನ್ನುವುದನ್ನೂ ನೋಡಿಕೊಳ್ಳೋಣ. ನಾವೇ ಮಾಡುವ ತಪ್ಪುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯೋಣ. ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ನಾವು ಶ್ರೀಮಂತರಾಗಬೇಕಾದರೆ; ಬಡವರಾಗಿ ಉಳಿಯುವುದಕ್ಕೆ ಏನು ಮಾಡುತ್ತೇವೋ ಅದನ್ನು ಮಾಡಬಾರದು.
ಶ್ರೀಮಂತರಾಗುವುದಕ್ಕೆ ಎಲ್ಲರಿಗೂ ಆಸೆ ಇದೆ. ಆದರೆ ಆಸೆಯೇನೋ ಶ್ರೀಮಂತರಾಗುವುದಕ್ಕೆ ಇದೆಯೋ ಹೊರತು ವರ್ತನೆ ಮಾತ್ರ ಬಡವರಾಗುವುದಕ್ಕೆ ಪೈಪೋಟಿ ನಡೆಸಿದ ಹಾಗೆ ಇದೆ. ಬಡವರಾಗಿಯೇ ಉಳಿಯುವ ಮಹಾನುಭಾವರ ವರ್ತನೆಗಳು ಹೇಗಿರುತ್ತವೆ ಎನ್ನುವುದನ್ನು ಉದಾಹರಣೆಗಳ ಮೂಲಕವೇ ಅರಿಯೋಣ. ಹಾಗೆ ಅರಿಯುತ್ತಲೇ ನಾವು ಎಲ್ಲಿದ್ದೇವೆ ಎನ್ನುವುದನ್ನೂ ನೋಡಿಕೊಳ್ಳೋಣ. ನಾವೇ ಮಾಡುವ ತಪ್ಪುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯೋಣ. ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ನಾವು ಶ್ರೀಮಂತರಾಗಬೇಕಾದರೆ; ಬಡವರಾಗಿ ಉಳಿಯುವುದಕ್ಕೆ ಏನು ಮಾಡುತ್ತೇವೋ ಅದನ್ನು ಮಾಡಬಾರದು.
1. ಪಕ್ಕದ ಮನೆಯವರು ಹೊಸದಾಗಿ ಆರಂಭವಾದ ಷೋರಂನಿಂದ 42 ಇಂಚಿನ ಟಿವಿ ಖರೀದಿಸಿರೋ, ಆಗ ಸುಮ್ಮನಿರದೆ ಅವರಿಗಿಂತ ತಾನೇನು ಕಡಿಮೆ ಎನ್ನುತ್ತಾ, ಅವರಿಗಿಂತ ಕಡಿಮೆ ಆದಾಯವಿದ್ದರೂ, ಅವರೆದುರು ತೋರಿಸುವುದಕ್ಕಾದರೂ ಅವರ ಹೊಟ್ಟೆ ಉರಿಸುವುದಕ್ಕಾದರೂ, 62 ಇಂಚಿನ ಟಿವಿ ಖರೀದಿಸುವವರು ಬಡವರಾಗುವುದಕ್ಕೆ ಪೈಪೋಟಿ ನಡೆಸುತ್ತಾರೆ.
2. ಈ ಬಾರಿ IPLನಲ್ಲಿ RCBಯೇ ಗೆಲ್ಲುವುದು, ಅನುಮಾನವೇ ಇಲ್ಲ. ಏನಂತ ಈಗ ಒಂದು ತಿಂಗಳ ಸಂಬಳವನ್ನು ಬೆಟ್ ಕಟ್ತುತ್ತೇನೆ. ಹೇಗಿದ್ದರೂ ನನ್ನ ಪರಿಣಿತಿ ಪ್ರಶ್ನಿಸುವೆ ಹಾಗಿಲ್ಲ. ನಾನೇ ಗೆಲ್ಲುವುದು. ಒಂದೇ ಶಾಟ್ ನಲ್ಲಿ ಆರು ತಿಂಗಳ ಸಂಬಳ ಬಂದರೆ ಬಿಡುವುದು ಯಾಕೆ? ಅಷ್ಟಕ್ಕೂ ನಾನೊಬ್ಬ ಒಳ್ಳೆಯ ಕ್ರಿಕೆಟ್ ವಿಶ್ಲೇಷಕ!
3. ಸ್ನೇಹಿತ ತನ್ನ ಕುಟುಂಬ ಸಮೇತ ನೇಪಾಳಕ್ಕೆ ಹೋಗಿ ಬಂದೆ ಎನ್ನುವ ಹಮ್ಮು ಅವನಿಗೆ. ಒಮ್ಮೆಯೂ ಕರೆಯಲಿಲ್ಲ. ನಾನೇನು ಕಡಿಮೆ. ನಾನೂ ಸಂಸಾರ ಸಮೇತ ಸಿಂಗಪೂರ, ದುಬೈಗಳಿಗೆ ಹೋಗಿ ಬರುತ್ತೇನೆ.
4. ಹೆಂಡತಿ ಈ ನಡುವೆ ಮುನಿಸಿಕೊಳ್ಳುತ್ತಿದ್ದಾಳೆ. ಹೇಗಿದ್ದರೂ ಅವಳ ಹುಟ್ಟಿದ ದಿನ ಹತ್ತಿರ ಬಂದಿದೆ. ಅವಳನ್ನೂ ಸಮಾಧಾನಿಸಲು ಒಂದು ಅವಕಾಶ. ಅವಳಿಗೊಂದು ಚಿನ್ನದ್ದೋ, ವಜ್ರದ್ದೋ ಬೆಲೆಬಾಳುವ ಉಡುಗೊರೆ ಕೊಡಿಸಿದರಾಯಿತು. ಹೇಗಿದ್ದರೂ ಒಟ್ಟಿಗೆ ಹಣ ನೀಡಬೇಕಿಲ್ಲ. ಕಂತುಗಳಲ್ಲಿ ಕಟ್ಟಿದರಾಯಿತು. ಹೆಂಡತಿಗೆ ಕೊಡಿಸದೇ ಇನ್ಯಾರಿಗೆ ಕೊಡಿಸಲಿ?
5. ನಗರದ ಹೊರವಲಯದಲ್ಲಿ ನನ್ನ ಸ್ನೇಹಿತ ಸೈಟ್ ಖರೀದಿಸಿದ. ಅವನು ತೆಗೆದುಕೊಂಡ ಅಂದರೆ ನಾನು ಯಾವುದೇ ಅನುಮಾನವಿಲ್ಲದೇ ಕೊಳ್ಳಬಹುದು ಯಾಕೆಂದರೆ ಅವನು ಬೇಕಾದಷ್ಟು ಸೈಟ್ ಖರೀದಿಸಿ ಅನುಭವ ಇರುವವನು. ಅವನೇ ಹೂಡಿಕೆ ಮಾಡಿದ್ದಾನೆ ಎಂದ ಮೇಲೆ ಮತ್ತೊಮ್ಮೆ ಪರಿಶೀಲಿಸುವ ಅಗತ್ಯ ಇಲ್ಲವೇ ಇಲ್ಲ.
6. . ನಾನು FDಯಲ್ಲಿ ಇಟ್ಟ ಹಣ ಕೇವಲ ಶೇಕಡಾ 8ರಷ್ಟು ಮಾತ್ರ ಗಳಿಸುತ್ತಿದೆ. ದಿನವೂ ಪತ್ರಿಕೆಯಲ್ಲಿ ಚಿಟ್-ಫಂಡ್ ಜಾಹೀರಾತು ಬರುತ್ತಿದೆ. ಶೇಕಡಾ 20ರಷ್ಟು ಬಡ್ಡಿ ಕೊಡುವಾಗ ನಾನೇಕೆ ಬಿಡಲಿ? ಅಲ್ಲಿ ಹಣ ಹಾಕಿದ ಅಷ್ಟೇಲ್ಲಾ ಜನರಿರುವಾಗ, ಅವರೇನೂ ದಡ್ಡರೇ? ನಾನು ಸುಮ್ಮನೇ ಇಷ್ಟು ಕಡಿಮೆ ಬಡ್ಡಿ ಪಡೆದು ಯಾಕೆ ಸಂತೃಪ್ತಿ ಹೊಂದಬೇಕು?
7. ದಿನ ದಿನವೂ ಖರ್ಚಿನ ವೆಚ್ಚದ ಡೈರಿ ಯಾಕೆ ಬರೆಯಬೇಕು? ಕಷ್ಟವಾದರೆ ಸಾಲ ನೀಡುವ ಸ್ನೇಹಿತರು ಇರುವಾಗ ನಾನೇಕೆ ಯೋಚಿಸಬೇಕು? ಈಗಂತೂ ಕ್ರೆಡಿಟ್ ಕಾರ್ಡ್ ಇದೆಯಲ್ಲ?
8. ಆರೋಗ್ಯ ವಿಮೆಯ ಅಗತ್ಯತೆ ನನಗಿಲ್ಲ. ನಮ್ಮ ತಾತ 91 ವರ್ಷ ಬದುಕಿದ್ದರು. ನಮ್ಮ ತಂದೆಗೆ ಈಗ 70 ವರ್ಷ, ಅವರೂ ಆರೋಗ್ಯವಾಗಿದ್ದರೆ. ಆರೋಗ್ಯ ವಿಮೆಯ ಕಂತು ನಾನೇಕೆ ಕಟ್ಟಲಿ?
9. ಮ್ಯೂಚುವಲ್ ಫಂಡಿನಲ್ಲಿ ಯಾರಪ್ಪಾ ಹಣ ತೊಡಗಿಸುತ್ತಾರೆ? ಅಷ್ಟು ದೀರ್ಘ ಅವಧಿಗೆ ಹಣ ತೊಡಗಿಸುವುದರ ಬದಲು ಷೇರು ಮಾರುಕಟ್ಟೆಯಲ್ಲಿ ಡೇ ಟ್ರೇಡಿಂಗ್ ಮಾಡಿದರೆ ಬೇಗ ಬೇಗ ಹಣ ಸಂಪಾದಿಸಬಹುದು.
10. ಆರ್ಥಿಕ ಸಲಹೆಗಾರರು ನಮಗೇಕೆ? ಗೂಗಲ್ ಅಲ್ಲೇ ಎಲ್ಲವೂ ಸಿಗುವಾಗ; ಮಾಹಿತಿ ಬೆರಳತುದಿಯಲ್ಲಿ ಇರುವಾಗ ಅವರ ಅಗತ್ಯತೆಯೇ ಇಲ್ಲ.
ಈ ಮೇಲಿನ ಅಂಶಗಳು 'ಯಾರು ಬಡವರಾಗಿಯೇ ಉಳಿಯಲು ಬಯಸುತ್ತಾರೋ' ಅವರಿಗಾಗಿ ಮಾತ್ರ.
ಎಂದಿಗೂ ಅತಿ ಶೀಘ್ರದಲ್ಲಿ ಶ್ರೀಮಂತರಾಗುವ ಬಯಕೆಯನ್ನು ಹೊಂದಬೇಡಿ ಹಾಗೂ ಜನಸಮೂಹವನ್ನು ಅನುಸರಿಸಬೇಡಿ.
ಆರ್ಥಿಕತೆಯ ಬಗ್ಗೆ ಸಮರ್ಥ ಜ್ಞಾನವುಳ್ಳ ಹಾಗು ನಿಮ್ಮ ಹಿತವನ್ನು ಕಾಪಾಡುವ ವ್ಯಕ್ತಿಯ ಮಾರ್ಗದರ್ಶನವನ್ನು ಪಡೆಯಿರಿ.
ನಿಮಗೆ ಒಳ್ಳೆಯದಾಗಲಿ.
ವಂದನೆಗಳು,
ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್,
www.srikaviwealth.com
You can subscribe to my TELEGRAM channel
Become Wealthy by following the habits of what the Wealthy do.
Join my Channel WEALTHY HABITS and change your habits and have only WEALTHY HABITS.
http://t.me/joinchat/AAAAAEh49fBN2bkUQnFKIQ
If you have already downloaded Telegram App just type https://t.me/WealthyHabits and JOIN
You are strongly encouraged to consult your financial planner before taking any decision regarding this investment. The views expressed here is the authors personal views and should not be intrepresented as a recommendation to invest/avoid.
Srikanth Matrubai Author of the Amazon Best Seller DON'T RETIRE RICH
Do read the book and give your valuable feedback and request you to post positive comments on the Amazon. https://amzn.to/3cHUM6M/ You can purchase the book on amazon and flipkart
Request my readers (specially Kannada readers) to subscribe the magazine PROFIT PLUS
No comments:
Post a Comment